"ಪರಿಹಾರ" ತಂತ್ರಾಂಶ : -
1. ಪರಿಚಯ :

    ಪರಿಹಾರ ತಂತ್ರಂಶವು ವೆಬ್ ಆಧಾರಿತವಾಗಿದ್ದು, ಇನ್ ಪುಟ್ ಸಬ್ಸಿಡಿ ಉದ್ದೇಶಕ್ಕಾಗಿ ರೈತರ ಜಮೀನಿನ ವಿವರಗಳು, ಬೆಳೆ ವಿವರಗಳು , ಆಧಾರ್ ವಿವರಗಳು ಹಾಗೂ ಬ್ಯಾಂಕ್ ಖಾತೆಯ ವಿವರಗಳ ಡಾಟಾವನ್ನು ನಮೂದಿಸಿ ಅನುಮೋದಿಸಲು ಬಳಸಬಹುದಾಗಿದೆ.

ವೆಬ್ ಸೈಟ್ ವಿಳಾಸ : http://landrecords.karnataka.gov.in/parihara
ತಂತ್ರಾಂಶದ ಬಳಕೆದಾರರು :

    Operator ( Nadakacheri / Grampanchayath)
    ಗ್ರಾಮಲೆಕ್ಕಿಗ

2. ಪ್ರಮುಖ ಅಂಶಗಳು :

    • ಜಮೀನಿನ ವಿವರಗಳನ್ನು ಭೂಮಿ ದತ್ತಾಂಶದಿಂದ ಪಡೆದು ದಾಖಲಿಸುವ ಸೌಕರ್ಯ

    • ಬೆಳೆ ವಿವರಗಳು,ಬೆಳೆ ವಿಸ್ತೀರ್ಣ ಹಾಗೂ ಹಾನಿಗಳಗಾದ ವಿಸ್ತೀರ್ಣ ದಾಖಲಿಸುವ ಸೌಕರ್ಯ

    • ಆಧಾರ್ ವಿವರಗಳನ್ನು ದಾಖಲಿಸುವ ಸೌಕರ್ಯ

   • ಬ್ಯಾಂಕ್ ಖಾತೆಯ ವಿವರಗಳನ್ನು ದಾಖಲಿಸುವ ಸೌಕರ್ಯ

3. ಡಾಟಾ ನಮೂದಿಸುವ ಬಗ್ಗೆ - ಆಪರೇಟರ್ :

ಒಮ್ಮೆ ತಂತ್ರಾಂಶಕ್ಕೆ ಆಪರೇಟರನು ಪ್ರವೇಶಿಸಿದಾಗ ಕೆಳಕಂಡ ಆಯ್ಕೆಗಳು ಇರುತ್ತವೆ.

    • New ಹೊಸ - ಹೊಸದಾಗಿ ಡಾಟಾ ಎಂಟ್ರಿ ಮಾಡಲು ಬಳಸಬಹುದಾಗಿದೆ

    • View ವೀಕ್ಷಣೆ - ಆಯ್ದ ವಿನಂತಿಯನ್ನು ವೀಕ್ಷಿಸಲು ಈ ಆಯ್ಕೆಯನ್ನು ಉಪಯೋಗಿಸಬಹುದಾಗಿದೆ. ಒಮ್ಮೆ ಉಳಿಸಿದ ಡಾಟಾದಲ್ಲಿ ಚೆಕ್ ಲಿಸ್ಟ್ ತೆಗೆಯುವ ಮೊದಲು ಎನಾದರೂ ಬದಲಾಯಿಸ ಬೇಕಾದ ಸಂದರ್ಭದಲ್ಲಿ ಅಥವಾ ಗ್ರಾಮಲೆಕ್ಕಿಗರು ವಾಪಸ್ ಕಳುಹಿಸಿದ ಕೋರಿಕೆಗಳಿಗೆ ಬದಲಾವಣೆಬೇಕಾದ್ದಲ್ಲಿ ವೀಕ್ಷಣೆ ಆಯ್ಕೆಯ ಮುಖಾಂತರ ವಿನಂತಿಯನ್ನು ವೀಕ್ಷಿಸಿ ಎಡಿಟ್ ಆಯ್ಕೆಯನ್ನು ಬಳಸಿ ಬದಲಾವಣೆ ಮಾಡ ಬಹುದಾಗಿರುತ್ತದೆ.

    • Search based on request ID ಕೋರಿಕೆ ಸಂಖ್ಯೆ ಆಧಾರಿತ ಶೋಧನೆ - ಆಪರೇಟರನು ದಾಖಲಿಸಿದ ಎಲ್ಲ ಕೋರಿಕೆಗಳ ಪಟ್ಟಿಯು ಅವನ ಲಾಗಿನ್ ನಲ್ಲಿ ಗೋಚರಿಸುತ್ತವೆ. ಯಾವುದಾದರೂ ನಿರ್ಧಿಷ್ಟವಾದ ವಿನಂತಿಯಲ್ಲಿ ಎನಾದರೂ ಬದಲಾಯಿಸಬೇಕಾದ್ದಲ್ಲಿ ಆ ವಿನಂತಿಯನ್ನು ಶೋಧಿಸಲು ಆ ಆಯ್ಕೆಯನ್ನು ಬಳಸಬಹುದಾಗಿದೆ.

    • All ಎಲ್ಲಾ : ಎಲ್ಲಾ ವಿನಂತಿಗಳ ಪಟ್ಟಿಯನ್ನು ಪಡೆಯಬಹುದು.

    • Approval pending(ಅನುಮೋದನೆಗೆ ಬಾಕಿ) : ಗ್ರಾಮಲೆಕ್ಕಿಗರ ಅನುಮೋದನೆಗೆ ಬಾಕಿ ಇರುವ ವಿನಂತಿಗಳ ಪಟ್ಟಿಯನ್ನು ಮಾತ್ರ ಪಡೆಯಬಹುದು.

    • VA approved (ಅನುಮೋದಿಸಿದ): ಗ್ರಾಮಲೆಕ್ಕಿಗರು ಅನುಮೋದಿಸಿದ ವಿನಂತಿಗಳ ಪಟ್ಟಿಯನ್ನು ಮಾತ್ರ ಪಡೆಯಬಹುದು.

    • Partial completed (ಭಾಗಶಹ ಡಾಟಾ ನಮೂದಿಸಿದ): ಭಾಗಶಹ ಡಾಟಾ ನಮೂದಿಸಿದ ವಿನಂತಿಗಳ ಪಟ್ಟಿಯನ್ನು ಮಾತ್ರ ಪಡೆಯಬಹುದು.

ಆಪರೇಟರನು ಹೊಸ ಆಯ್ಕೆಯ ಮೇಲೆ ಕ್ಲಿಕ್ಕಿಸಿ ಹೊಸದಾಗಿ ಡಾಟಾ ನಮೂದಿಸುವ ಕಾರ್ಯವನ್ನು ಪ್ರಾರಂಭಿಸಬಹುದು ಚಿತ್ರ -1 ರಲ್ಲಿ ತೋರಿಸಿರುವಂತೆ

ಚಿತ್ರ 1

3.1 ಜಮೀನಿನ ವಿವರಗಳ ನಮೂದು:

    ಡಾಟಾ ನಮೂದು ಪ್ರಾರಂಭಿಸಲು ಹೊಸ (New tab) ಟ್ಯಾಬ್ ಮೇಲೆ ಕ್ಲಿಕ್ ಮಾಡಬೇಕು ಚಿತ್ರ-2 ರಲ್ಲಿ ತೋರಿಸಿರುವಂತೆ . ಎಲ್ಲಾ ಡಾಟಾ ನಮೂದುಗಳನ್ನು ಒಂದೇ ಸ್ಕ್ರೀನ್ ನಲ್ಲೇ ನಿರ್ವಹಿಸಬಹುದಾಗಿದೆ. ಮೊದಲು ಜಮೀನಿನ ವಿವರಗಳನ್ನು ಭೂಮಿ ದತ್ತಾಂಶ ದಿಂದ ಪಡೆದು ದಾಖಲಿಸಬಹುದು..

ಚಿತ್ರ 2


ಯಾವ ಗ್ರಾಮದ ಡಾಟಾವನ್ನು ನಮೂದು ಮಾಡಬೇಕಾಗಿದಯೋ ಆ ಹೋಬಳಿ, ಗ್ರಾಮದ ವೃತ್ತ ಹಾಗು ಗ್ರಾಮವನ್ನು ಆಯ್ಕೆ ಮಾಡಿ, ಸರ್ವೆ ನಂಬರನ್ನು ದಾಖಲಿಸಿ. ಈಗ ತಂತ್ರಾಂಶವು ಭೂಮಿ ದತ್ತಾಂಶಕ್ಕೆ ಸಂಪರ್ಕಿಸಿ ಹಿಸ್ಸಾ ನಂಬರನ್ನು ಪಡೆದು ತೋರಿಸುತ್ತದೆ. ಸರ್ವೆ ನಂಬರಿನ ಅಕ್ಷರ ಭಾಗ ಹಾಗೂ ಹಿಸ್ಸಾ ನಂಬರನ್ನು ಆಯ್ಕೆ ಮಾಡಿ ಚಿತ್ರ 3 ರಲ್ಲಿ ತೋರಿಸಿರುವಂತೆ ಉದಾಹರಣೆ : ಡಾಟಾ ನಮೂದು ಮಾಡಬೇಕಾದ ಸರ್ವೆ ನಂಬರ್ 13/*/1 ಆಗಿದ್ದಲ್ಲಿ, ಸರ್ವೆನಂಬರ್ 13 , ಅಕ್ಷರ ಭಾಗ * ಮತ್ತು ಹಿಸ್ಸಾನಂಬರ್ 1 ಆಗಿರುತ್ತದೆ.

ಚಿತ್ರ 3


    ಚಿತ್ರ 4 ರಲ್ಲಿ ತೋರಿಸಿರುವಂತೆ ಸಂಬಂಧಪಟ್ಟ ಸ್ವಾಧೀನದಾರನನ್ನು ಸ್ವಾಧೀನದಾರರ ಪಟ್ಟಿಯಿಂದ ಆಯ್ಕೆ ಮಾಡಿ, ತಂದೆಯ ಹೆಸರು ತನ್ನಿಂದ ತಾನೆ ನಕಲುಗೊಳ್ಳುತ್ತದೆ.

ಚಿತ್ರ 4


    ಗ್ರಾಮಲೆಕ್ಕಿಗರ ವರದಿಯಂತೆ ಸ್ವಾಧೀನದಾರನು ಪಹಣಿಯಲ್ಲಿರುವರೇ ಎಂಬ ಪ್ರಶ್ನೆಗೆ ತಂತ್ರಾಂಶವು ತನ್ನಿಂದ ತಾನೇ ಹೌದು ಎಂದು ಉತ್ತರಿಸಿ, ಸ್ವಾಧೀನದಾರನ ವಿವರಗಳು ನಕಲುಗೊಂಡು ಲಿಂಗ, ಮೊಬೈಲ್ ನಂಬರ್, ಸಣ್ಣ ಹಿಡುವಳಿದಾರನೇ ಅಥವಾ ಇಲ್ಲವೇ ಎಂಬ ಮಾಹಿತಿಯನ್ನು ದಾಖಲಿಸಬಹುದಾಗಿದೆ ಚಿತ್ರ 5 ರಲ್ಲಿ ತೋರಿಸಿರುವಂತೆ.

ಚಿತ್ರ 5


    ಗ್ರಾಮಲೆಕ್ಕಿಗರ ವರದಿಯಂತೆ ಸ್ವಾಧೀನದಾರನು ಪಹಣಿಯಲ್ಲಿ ಇಲ್ಲವಾದರೆ ಚೆಕ್ ಬಾಕ್ಸ್ ನ್ನು ಡಿಸಲೆಕ್ಟ್ ಮಾಡಬೇಕು ಹಾಗೂ ಚಿತ್ರ 6 ರಲ್ಲಿ ತೋರಿಸಿರುವಂತೆ ಕಾರಣವನ್ನು ಆಯ್ಕೆ ಮಾಡಬೇಕು ಮತ್ತು ಸ್ವಾಧೀನದಾರನ ಹೆಸರು ಹಾಗೂ ಇನ್ನಿತರ ವಿವರಗಳನ್ನು ನಮೂದಿಸಬೇಕು.

ಚಿತ್ರ 6


3.2 ಆಧಾರ್ ವಿವರಗಳ ನಮೂದು:

    • ಆಧಾರ್ ವಿವರಗಳನ್ನು 2 ರೀತಿಯಾಗಿ ನಮೂದಿಸಬಹುದು (1) ಡಾಟಾ ಎಂಟ್ರಿ ಮಾಡುವ ಮುಖಾಂತರ (2) ಬಾರ್ ಕೋಡ್ ನಿಂದ ಆಧಾರ್ ಕಾರ್ಡಿನಲ್ಲಿರುವ ಡಾಟಾವನ್ನು ರೀಡ್ ಮಾಡಿ ಪಡೆದುಕೊಳ್ಳುವುದು.

    • ಡಾಟಾ ಎಂಟ್ರಿ ಮಾಡುವುದಾದರೆ, ಆಪರೇಟರನು ಆಧಾರ್ ನಂಬರ್ ಮತ್ತು ಆಧಾರ್ ಕಾರ್ಡ್ ನಲ್ಲಿರುವಂತೆಯೇ ಹೆಸರನ್ನು ನಮೂದಿಸಬೇಕು.

    • ಆಧಾರ್ ಕಾರ್ಡ್ ನಲ್ಲಿರುವ ಹೆಸರು ಮತ್ತು ಗ್ರಾಮಲೆಕ್ಕಿಗರ ವರದಿಯಲ್ಲಿರುವಂತೆಯೇ ಇದೆಯೇ ಎಂಬ ಪ್ರಶ್ನೆಗೆ ಹೌದು ಎಂದು ಸಲೆಕ್ಟ್ ಆಗಿರುತ್ತದೆ.

ಚಿತ್ರ 7


3.3 ಬ್ಯಾಂಕ್ ವಿವರಗಳ ನಮೂದು:

    • ಬ್ಯಾಂಕಿನ ಐ.ಎಫ್.ಎಸ್.ಸಿ ಕೋಡನ್ನು ಮೊದಲು ನಮೂದಿಸಬೇಕು ನಂತರ ಬ್ಯಾಂಕಿನ ವಿವರಗಳಾದ ಜಿಲ್ಲೆ, ತಾಲ್ಲೂಕು, ಬ್ಯಾಂಕಿನ ಹೆಸರು ಹಾಗೂ ಶಾಖೆಯ ಹೆಸರುಗಳು ನಕಲುಗೊಳ್ಳುತ್ತವೆ. ಐ.ಎಫ್.ಎಸ್.ಸಿ ಕೋಡ್ ಗೊತ್ತಿಲ್ಲದಿದ್ದರೆ ಟಾಗಲ್ ( ) ಬಟನ್ ಮೇಲೆ ಕ್ಲಿಕ್ಕಿಸಿದರೆ ಬ್ಯಾಂಕಿನ ವಿವರಗಳಾದ ಜಿಲ್ಲೆ, ತಾಲ್ಲೂಕು, ಬ್ಯಾಂಕಿನ ಹೆಸರು ಹಾಗೂ ಶಾಖೆಯ ಹೆಸರುಗಳನ್ನು ಆಯ್ಕೆ ಮಾಡಿಕೊಳ್ಳಬಹುದು ಹಾಗೂ ಐ.ಎಫ್.ಎಸ್.ಸಿ ಕೋಡ್ ತನ್ನಿಂದ ತಾನೇ ನಕಲುಗೊಳ್ಳುತ್ತದೆ.

    • ಈಗ ಆಪರೇಟರನು ಅಕೌಂಟ್ ನಂಬರ್ ಮತ್ತು ಬ್ಯಾಂಕ್ ಖಾತೆದಾರನ ಹೆಸರನ್ನು ನಮೂದಿಸಬೇಕು.. holder.

    • ಗ್ರಾಮಲೆಕ್ಕಿಗನ ವರದಿಯಲ್ಲಿರುವಂತೆ ಬ್ಯಾಂಕ್ ಖಾತೆದಾರನ ಹೆಸರು ಇದೆಯೇ ಇಲ್ಲವೇ ಎಂಬ ಚೆಕ್ ಬಾಕ್ಸ್ ನ್ನು ಸಲೆಕ್ಟ್ ಅಥವಾ ಡಿ ಸಲೆಕ್ಟ್ ಮಾಡಬೇಕು.

ಚಿತ್ರ 8

ಚಿತ್ರ 9


3.4 ಬೆಳೆ ವಿವರಗಳ ನಮೂದು:

    ಚಿತ್ರ 10 ರಲ್ಲಿ ತೋರಿಸಿರುವಂತೆ, ಬೆಳೆ ವಿವರಗಳನ್ನು ನಮೂದಿಸಲು ಬೆಳೆಯ ಹೆಸರು ಹಾಗೂ ಬೆಳೆಯ ರೀತಿಯನ್ನು ಆಯ್ಕೆ ಮಾಡಿ, ಬೆಳೆಯ ವಿಸ್ತೀರ್ಣ ಹಾಗೂ ಬೆಳೆ ನಷ್ಟವಾದ ವಿಸ್ತೀರ್ಣ ವನ್ನು ನಮೂದಿಸಬೇಕು. ಬೆಳೆಯ ವಿಸ್ತೀರ್ಣವು ಸ್ವಾಧೀನದಾರನ ವಿಸ್ತೀರ್ಣಕ್ಕಿಂತ ಹೆಚ್ಚಿರಬಾರದು ಮತ್ತು ಬೆಳೆ ನಷ್ಟವಾದ ವಿಸ್ತೀರ್ಣವು ಬೆಳೆ ವಿಸ್ತೀರ್ಣಕ್ಕಿಂತ ಹೆಚ್ಚಿರಬಾರದು.

ಚಿತ್ರ 10


ಎಲ್ಲಾ ಫೀಲ್ಡ್ ಗಳನ್ನು ನಮೂದಿಸಿದ ಮೇಲೆ ಸೇರಿಸಿ ಬಟನ್ ಮೇಲೆ ಕ್ಲಿಕ್ಕಿಸಬೇಕು ಚಿತ್ರ 11 ರಲ್ಲಿ ತೋರಿಸಿರುವಂತೆ. ಈಗೆ ಎಷ್ಟು ಬೆಳೆ ಗಳನ್ನಾದರೂ ಸೇರಿಸಬಹುದು.

ಚಿತ್ರ 11


ಎಲ್ಲಾ ವಿವರಗಳು ಅಂದರೆ ಜಮೀನಿನ ವಿವರಗಳು, ಆಧಾರ್ ವಿವರಗಳು, ಬ್ಯಾಂಕಿನ ವಿವರಗಳು ಹಾಗೂ ಬೆಳೆಗಳ ವಿವರಗಳನ್ನು ದಾಖಲಿಸಿದ ನಂತರ ಉಳಿಸು ಬಟನ್ ಮೇಲೆ ಕ್ಲಿಕ್ ಮಾಡಬೇಕು. ಈಗ ಎಲ್ಲಾ ವಿವರಗಳು ಸೇವ್ ಆಗಿ ವಿನಂತಿಯ ಐಡಿ ಸಂಖ್ಯೆಯು ಸೃಜನೆಯಾಗುತ್ತದೆ.
New ಹೊಸ: ಹೊಸದಾಗಿ ಡಾಟಾ ನಮೂದು ಪ್ರಾರಂಭಿಸಲು ಈ ಆಯ್ಕೆಯನ್ನು ಬಳಸಬಹುದು .
Edit ಎಡಿಟ್ - ಒಮ್ಮೆ ಉಳಿಸಿದ ಡಾಟಾದಲ್ಲಿ ಚೆಕ್ ಲಿಸ್ಟ್ ತೆಗೆಯುವ ಮೊದಲು ಎನಾದರೂ ಬದಲಾಯಿಸ ಬೇಕಾದ ಸಂದರ್ಭದಲ್ಲಿ ಅಥವಾ ಗ್ರಾಮಲೆಕ್ಕಿಗರು ವಾಪಸ್ ಕಳುಹಿಸಿದ ಕೋರಿಕೆಗಳಿಗೆ ಬದಲಾವಣೆಬೇಕಾದ್ದಲ್ಲಿ ಅಥವಾ ಭಾಗಶಹ ಡಾಟಾ ನಮೂದಿಸಿರುವ ವಿನಂತಿಗಳನ್ನು ಬದಲಿಸಿಲು ಈ ಆಯ್ಕೆಯನ್ನು ಬಳಸಬಹುದಾಗಿರುತ್ತದೆ
Copy ನಕಲು: ಒಬ್ಬನೇ ಸ್ವಾಧೀನದಾರ ಒಂದಕ್ಕಿಂತ ಹೆಚ್ಚು ಸರ್ವೆ ನಂಬರುಗಳಲ್ಲಿ ಜಮೀನನ್ನು ಹೊಂದಿದ್ದರೆ ಅವನ ಎಲ್ಲಾ ವಿವರಗಳನ್ನು ಪದೇ ಪದೇ ನಮೂದಿಸುವ ಬದಲು ಒಮ್ಮೆ ನಮೂದಿಸಿದ ಡಾಟಾವನ್ನು ಉಳಿಸಿದ ನಂತರ ನಕಲು ಆಯ್ಕೆಯನ್ನು ಬಳಸಿ ಎಲ್ಲಾ ಡಾಟಾವನ್ನು ನಕಲುಗೊಳಿಸಿ ಹೊಸ ರೆಕಾರ್ಡನ್ನು ಸೃಷ್ಟಿಸಿ ಕೇವಲ ಸರ್ವೆ ನಂಬರನ್ನು ಬದಲಿಸಿ ಮುಂದುವರೆಯಬಹುದು.
Delete ತೆಗೆ : ಉಳಿಸಲಾದ ವಿನಂತಿಗಳನ್ನು ತೆಗೆದು ಹಾಕಲು ಬಳಸಬಹುದು.

4. ತಪಾಸಣಾ ಪಟ್ಟಿ (ಚೆಕ್ ಲಿಸ್ಟ್) ತಯಾರಿಕೆ:
ಡಾಟಾ ನಮೂದು ಕಾರ್ಯ ಮುಗಿದ ನಂತರ, ಅವಶ್ಯಕವಿದ್ದಲ್ಲಿ ಗ್ರಾಮವಾರು ತಪಾಸಣಾ ಪಟ್ಟಿ ತಯಾರಿಸಲು ಹೋಮ್ ಆಯ್ಕೆಯಲ್ಲಿರುವ ಚೆಕ್ ಲಿಸ್ಟ್ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಗಮನಿಸಿ, ಒಮ್ಮೆ ಚೆಕ್ ಲಿಸ್ಟ್ ತಯಾರಾದ ಮೇಲೆ ವಿನಂತಿಯ ವಿವರಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಹಾಗೆ ಬದಲಾಯಿಸಬೇಕಾದರೆ ಗ್ರಾಮಲೆಕ್ಕಿಗರು ತಿದ್ದುಪಡಿಗೆ ಹಿಂತಿರುಗಿಸಿದಾಗ ಮಾತ್ರ ಸಾಧ್ಯ.

ತಪಾಸಣಾ ಪಟ್ಟಿ ತಯಾರಿಸಲು ಚಿತ್ರದಲ್ಲಿ ತೋರಿಸಿರುವಂತೆ ಚೆಕ್ ಲಿಸ್ಟ್ ಬಟನ್ ಮೇಲೆ ಕ್ಲಿಕ್ಕಿಸಿ. ಹೋಬಳಿ ಹಾಗೂ ಗ್ರಾಮವನ್ನು ಆಯ್ಕೆ ಮಾಡಿ, ಗೆಟ್ ಚೆಕ್ ಲಿಸ್ಟ್ ಡಾಟಾ ಬಟನ್ ಮೇಲೆ ಕ್ಲಿಕ್ ಮಾಡಿ
ಜನರೇಟ್ ಚೆಕ್ ಲಿಸ್ಟ್ ಬಟನ್ ಮೇಲೆ ಕ್ಲಿಕ್ಕಿಸಿದರೆ ಎಕ್ಷೆಲ್ ಮಾದರಿಯಲ್ಲಿ ಚೆಕ್ ಲಿಸ್ಟ್ ತಯಾರಾಗುತ್ತದೆ.

5. ಗ್ರಾಮಲೆಕ್ಕಿಗರ ಪರಿಶೀಲನೆ ಮತ್ತು ಅನುಮೋದನೆ:
ಡಾಟಾ ನಮೂದು ಕಾರ್ಯ ಮುಗಿಸಿ ಉಳಿಸಿದ ಎಲ್ಲಾ ವಿನಂತಿಗಳು ಅನುಮೋದನೆಗಾಗಿ ಗ್ರಾಮಲೆಕ್ಕಿಗರ ಲಾಗಿನ್ ಗೆ ವರ್ಗಾಹಿಸಲ್ಪಡುತ್ತವೆ. ಈಗ ಗ್ರಾಮಲೆಕ್ಕಿಗರು ವಿನಂತಿಯನ್ನು ಆಯ್ಕೆ ಮಾಡಿ ಪರಿಶೀಲಿಸಿ ಸರಿ ಇದ್ದರೆ ಅನುಮೋದಿಸಬಹುದು ಅಥವಾ ಏನಾದರೂ ದೋಷಗಳು ಕಂಡು ಬಂದಲ್ಲಿ ಸರಿಪಡಿಸಲು ವಾಪಸ್ ಆಪರೇಟರ್ ಲಾಗಿನ್ ಗೆ ಕಳುಹಿಸಬಹುದು. ತಮ್ಮ ಲಾಗಿನ್ ನಲ್ಲಿರುವ ಎಲ್ಲಾ ವಿನಂತಿಗಳನ್ನು Bulk Approve ಬಟನ್ ಮೇಲೆ ಕ್ಲಿಕ್ಕಿಸುವ ಮೂಲಕ ಒಮ್ಮೆಲೇ ಅನುಮೋದಿಸಬಹುದು.

ಸಲೆಕ್ಟ್ ಬಟನ್ ಮೇಲೆ ಕ್ಲಿಕ್ಕಿಸಿ ಅನುಮೋದಿಸಬೇಕಾದ ವಿನಂತಿಯನ್ನು ಆಯ್ಕೆ ಮಾಡಿಕೊಳ್ಳಬೇಕು. ಇಲ್ಲಿ 2 ಬಟನ್ ಗಳಿರುತ್ತವೆ.
• ಆಪ್ರೂವ್ ಬಟನ್ : ವಿನಂತಿಯನ್ನು ಅನುಮೋದಿಸಲು ಬಳಸಬಹುದು
• ಸೆಂಡ್ ಫಾರ್ ಕರೆಕ್ಷನ್ : ಏನಾದರೂ ದೋಷಗಳು ಕಂಡು ಬಂದಲ್ಲಿ ಸರಿಪಡಿಸಲು ವಾಪಸ್ ಆಪರೇಟರ್ ಲಾಗಿನ್ ಗೆ ಕಳುಹಿಸಬಹುದು. ಹೀಗೆ ವಾಪಾಸ್ ಕಳುಹಿಸಿದ ವಿನಂತಿಗಳನ್ನು ಆಪರೇಟರನು ಎಡಿಟ್ ಆಯ್ಕೆಯನ್ನು ಉಪಯೋಗಿಸಿ ದೋಷಗಳನ್ನು ಸರಿಪಡಿಸಬಹುದು.